: ನಟಿ ಸಂಜನಾ ಗಲ್ರಾನಿ, ಶಿವ ಪ್ರಕಾಶ್ ಚಿಪ್ಪಿಗೆ ಬಿಗ್ ರಿಲೀಫ್, ರದ್ದತಿಗೆ ಕೋರ್ಟ್ ಆದೇಶ! ನಟಿ ಸಂಜನಾ ಗಲ್ರಾನಿ ಹಾಗೂ ನಿರ್ಮಾಪಕ ಶಿವಪ್ರಕಾಶ್ ಚಿಪ್ಪಿ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿ ಹೈಕೋರ್ಟ್ ಅದೇಶ ನೀಡಿದೆ. ಬೆಂಗಳೂರು: ಈ ಹಿಂದೆ ಭಾರಿ ಸದ್ದು ಮಾಡಿದ್ದ ಸ್ಯಾಂಡಲ್‌ ವುಡ್ ಡ್ರಗ್ಸ್ ಕೇಸ್‌ನಲ್ಲಿ ( ) ನಟಿ ಸಂಜನಾ ಗಲ್ರಾನಿ ಹಾಗೂ ನಿರ್ಮಾಪಕ ಶಿವಪ್ರಕಾಶ್ ಚಿಪ್ಪಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ರದ್ದತಿಗೆ ಕೋರ್ಟ್ ಆದೇಶ ನೀಡಿದೆ.ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಈ ಹಿಂದೆ ನಟಿ ಸಂಜನಾ ಗಲ್ರಾನಿ ಸೇರಿದಂತೆ ಸಿಸಿಬಿ ಅಧಿಕಾರಿಗಳು ಹಲವು ನಟಿಯರು ಸೇರಿ ಡ್ರಗ್ ಪೆಡ್ಲರ್‌ಗಳ ಬಂಧಿಸಿದ್ದರು. ಇದೀಗ ನಟಿ ಸಂಜನಾ ಗಲ್ರಾನಿ ಹಾಗೂ ನಿರ್ಮಾಪಕ ಶಿವಪ್ರಕಾಶ್ ಚಿಪ್ಪಿ ನಿರಾಳರಾಗಿದ್ದು, ಇಬ್ಬರ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿ ಹೈಕೋರ್ಟ್ ಅದೇಶ ನೀಡಿದೆ.ಏನಿದು ಪ್ರಕರಣ?2020ರ ಆಗಸ್ಟ್ 26ರಂದು ಸೆಲಿಬ್ರಿಟಿಗಳು, ಸಿನಿ ನಟ, ನಟಿಯರು ಹಾಗೂ ಉದ್ಯಮಿಗಳ ಮಕ್ಕಳು ಡ್ರಗ್ಸ್‌ ಪಾರ್ಟಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಎನ್‌ಸಿಬಿ ಅಧಿಕಾರಿಗಳು ಬೆಂಗಳೂರಿನ ಕಲ್ಯಾಣ ನಗರದಲ್ಲಿರುವ ರಾಯಲ್ ಸೂಟ್ಸ್ ಹೋಟೆಲ್ ಮೇಲೆ ದಾಳಿ ಮಾಡಿದ್ದರು.ಆಗ ಅಪಾರ ಪ್ರಮಾಣದ ಮಾದಕ ವಸುಗಳನ್ನು ವಶಪಡಿಸಿಕೊಂಡಿದ್ದ ಅಧಿಕಾರಿಗಳು ಅನೂಪ್, ರವೀಂದ್ರನ್ ಹಾಗೂ ಡಿ. ಅಂಕಿತ ಎಂಬ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದರು. ನಂತರ ತನಿಖೆ ವೇಳೆ ಇವರು ಸ್ಯಾಂಡಲ್‌ವುಡ್ ನಟ, ನಟಿಯರಿಗೆ ಮಾದಕ ವಸ್ತು ಪೂರೈಕೆ ಮಾಡಲಾಗುತ್ತಿದ್ದರು ಎಂಬ ಸ್ಫೋಟಕ ಸಂಗತಿ ಹೊರಬಿದ್ದಿತ್ತು. ಬಳಿಕ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿತ್ತು.ಮಾದಕ ವಸ್ತು ಜಾಲದ ಜತೆ ನಂಟು ಹೊಂದಿದ್ದಾರೆ ಎಂಬ ಆರೋಪದಲ್ಲಿ 2020ರ ಸೆಪ್ಟೆಂಬರ್‌ನಲ್ಲಿ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ, ನಿರ್ಮಾಪಕ ಶಿವಪ್ರಕಾಶ್ ಚಿಪ್ಪಿ ಸೇರಿ ಹಲವರ ಬಂಧನವಾಗಿತ್ತು. ನಂತರ ಜೈಲು ಸೇರಿದ್ದ ಸಂಜನಾಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಡಿಸೆಂಬರ್‌ನಲ್ಲಿ ಜಾಮೀನು ಸಿಕ್ಕಿತ್ತು.ಆದರೆ, ಎಫ್‌ಐಆರ್ ರದ್ದು ಕೋರಿ ಸಂಜನಾ ಹಾಗೂ ಶಿವಪ್ರಕಾಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೋಮವಾರ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ಏಕಸದಸ್ಯ ಪೀಠ ಎಫ್‌ಐಆರ್ ರದ್ದುಗೊಳಿಸಿದೆ.